ಶ್ರೀ. ಕೆ. ಶಿವರಾಂ

ನಿವೃತ್ತ ಭಾರತೀಯ ಆಡಳಿತಾತ್ಮಕ ಸೇವಾ ಅಧಿಕಾರಿ

ಛಲವಾದಿ ಮಹಾಸಭಾದ ಸ್ಥಾಪಕ ಅಧ್ಯಕ್ಷರು

ದಲಿತ ಮಹಾಸಭಾದ ಸ್ಥಾಪಕ ಅಧ್ಯಕ್ಷರು

ಹರಿಜನ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ

ಆರಂಭಿಕ ಜೀವನ

ವಿನಮ್ರ ಮತ್ತು ಸ್ವಾಭಿಮನಿ ಶ್ರೀ ಕೆ. ಶಿವರಾಂರವರು 1953ರ ಇಸವಿ ಏಪ್ರಿಲ್ ತಿಂಗಳ 6ನೇ ದಿನಾಂಕದಂದು ರಾಮನಗರ ಜಿಲ್ಲೆಯ ಉರಗಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಪ್ರತಿಭಾವಂತ ನಾಟಕ ಮಾಸ್ಟರ್ ದಿವಂಗತ ಕೆಂಪಯ್ಯ ಮತ್ತು ತಾಯಿ ಚಿಕ್ಕಬೋರಮ್ಮ.

ಶ್ರೀ ಕೆ. ಶಿವರಾಂರವರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಗ್ರಾಮದಲ್ಲಿ ಮುಗಿಸಿ, ನಂತರ ಬೆಂಗಳೂರಿಗೆ ಬಂದು ಮಲ್ಲೇಶ್ವರದ ಸರ್ಕಾರಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು.

ಪ್ರೌಢಶಾಲಾ ಶಿಕ್ಷಣದ ನಂತರ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಮತ್ತು ಶೀಘ್ರಲಿಪಿ ಕಲಿತು 1972ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡರು.

1973ರಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದಲ್ಲಿ ವರದಿಗಾರರಾಗಿ ಸೇರಿಕೊಂಡರು. ಈ ಇಲಾಖೆಯಲ್ಲಿ ಕೆಲಸ ಮಾಡಿಕೊಂಡೇ ಅವರು ವಿ.ವಿ ಪುರಂನ ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ. ಪದವಿಯನ್ನು ಪಡೆದುಕೊಂಡರು. ನಂತರ ಅವರು 1982ರಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದುಕೊಂಡರು.

1985ರಲ್ಲಿ ಅವರು ಕೆ.ಎ.ಎಸ್ ಪರೀಕ್ಷೆಯನ್ನು ಮುಗಿಸಿ ಪೊಲೀಸ್ ಉಪ ಅಧೀಕ್ಷಕರಾಗಿ ಆಯ್ಕೆಯಾದರು.

1986ರಲ್ಲಿ ಅವರು ಕರ್ನಾಟಕ ಆಡಳಿತ ಸೇವೆಯ (ಕೆ.ಎ.ಎಸ್) ಪರಿಶಿಷ್ಟ ಜಾತಿ ವರ್ಗದಲ್ಲಿ ಪ್ರಥಮ ಶ್ರೇಣಿ ಗಳಿಸಿ ಸಹಾಯಕ ಆಯುಕ್ತರಾಗಿ ಆಯ್ಕೆಯಾದರು. ಅವರು ಕರ್ನಾಟಕ ಪೊಲೀಸ್ ಅಕಾಡಮಿಯಲ್ಲಿ ತರಭೇತಿಯಲ್ಲಿರುವಾಗಲೇ ನಾಗರೀಕ ಸೇವಾ ಪರೀಕ್ಷೆ (UPSC) ಯನ್ನು ಮುಗಿಸಿ ಐ.ಎ.ಎಸ್ಗೆನ ಆಯ್ಕೆಯಾದರು. ಇದು ಅವರ ಬಾಲ್ಯದ ಕನಸಾಗಿತ್ತು. ಅಲ್ಲದೆ ಅವರು ದೇಶದಲ್ಲೇ ಕನ್ನಡದಲ್ಲಿ ಐ.ಎ.ಎಸ್‍ ಮುಗಿಸಿದ ಪ್ರಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾಧನೆಗಳು

ಐಏಎಸ್ ಅಧಿಕಾರಿ ಯಾದಗಿರಿ

1988ನೇ ಇಸವಿಯಲ್ಲಿ ಮೊದಲಬಾರಿಗೆ ಅವರನ್ನು ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ಉಪವಿಭಾಗದಲ್ಲಿ ಸಹಾಯಕ ಆಯುಕ್ತರನ್ನಾಗಿ ನೇಮಿಸಲಾಯಿತು.

ಒಬ್ಬ ಸಮರ್ಥ ಆಡಳಿತಗಾರನಾಗಿ ಅವರು ಯಾದಗಿರಿ ಜಿಲ್ಲೆಯಲ್ಲಿ ಖಾತೆ ಮತ್ತು ಆಸ್ತಿಪತ್ರಗಳನ್ನು ನೀಡುವುದರ ಮೂಲಕ ಅನೇಕ ಆಸ್ತಿ ತಕರಾರುಗಳನ್ನು ಸರಿಪಡಿಸಿದರು.

1988

ಬಿಜಾಪುರ

1989ರಲ್ಲಿ ಅವರನ್ನು ಬಿಜಾಪುರಕ್ಕೆ ವರ್ಗಾವಣೆಗೊಳಿಸಿ ನಗರಾಯುಕ್ತ ಮತ್ತು ಸಹಾಯಕ ಆಯುಕ್ತರನ್ನಾಗಿ ನೇಮಕ ಮಾಡಲಾಯಿತು. ಶ್ರೀ ಕೆ. ಶಿವರಾಂ ರವರು ಆಯುಕ್ತರಾಗಿ ತಮ್ಮ ಪ್ರಥಮ ಮೂಲಸೌಕರ್ಯ ನಿರ್ಮಾಣ ಯೋಜನೆಯಡಿಯಲ್ಲಿ ನಗರ ಕೇಂದ್ರದಲ್ಲಿ ಜೋಡಿರಸ್ತೆಯನ್ನು ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಂಡರು.

ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಗರದಲ್ಲಿ ಸೋಡಿಯಂ ಆವಿದೀಪಗಳನ್ನು ಬದಲಾಯಿಸಿ, ಪ್ರಕಾಶಮಾನವಾದ ಬೀದಿ ದೀಪಗಳನ್ನು ಅಳವಡಿಸಲಾಯಿತು.

ನಗರ ನೈರ್ಮಲ್ಯದತ್ತ ಜಾಗೃತಿಮೂಡಿಸಲು ಶ್ರೀ ಕೆ. ಶಿವರಾಂರವರು ಶುಚಿತ್ವದ ಕಡೆಗೆ ಹೆಚ್ಚು ಗಮನಹರಿಸಿದರು. ಅವರು ಮುಂಜಾನೆ ಸ್ವತಃ ತಾವೇ ಕೈಯಲ್ಲಿ ಪೊರಕೆ ಹಿಡಿದು ಇತರ ಅಧಿಕಾರಿಗಳೊಂದಿಗೆ ರಸ್ತೆಗಿಳಿದು ಕಸಗುಡಿಸಿ, ಸ್ವಚ್ಚಗೊಳಿಸಿಸುವುದರ ಮುಖಾಂತರ ಇದನ್ನು ಇಡೀ ಜಿಲ್ಲೆಯಾದ್ಯಂತ ಒಂದು ಸಾಮೂಹಿಕ ಚಳುವಳಿಯನ್ನಾಗಿ ಮಾಡಿದರು.

1989

ಬೆಂಗಳೂರು ಮಹಾನಗರಪಾಲಿಕೆ

ತದನಂತರ ಸರ್ಕಾರವು 1990ರಲ್ಲಿ ಶ್ರೀ ಕೆ. ಶಿವರಾಂರವರನ್ನು ಬೆಂಗಳೂರು ನಗರ ಉಪ ಆಯುಕ್ತ (ಡಿ.ಸಿ) ರನ್ನಾಗಿ ಮಾಡಿತು. ಅಲ್ಲಿ ಅವರು “ಜನರ ಮನೆ ಬಾಗಿಲಿಗೆ ಬೆಂಗಳೂರು ಮಹಾನಗರಪಾಲಿಕೆ” ಎಂಬ ಅಭಿಯಾನವನ್ನು ಪ್ರಾರಂಭಿಸಿದರು.

ಅವರು ರಾಜಾಜಿನಗರ ಮತ್ತು ಶ್ರೀರಾಂಪುರ ಮುಂತಾದ ಸ್ಥಳಗಳಲ್ಲಿ ಕಡುಬಡವರ ಗುಡಿಸಲುಗಳನ್ನು ಕೆಡವಿ ಅವರಿಗೆ ಕಾಂಕ್ರೀಟ್ ಮನೆಗಳನ್ನು ನೀಡುವಲ್ಲಿ ಯಶಸ್ವಿಯಾದರು. ಈ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡಲು ಮತ್ತು ಅಕ್ರಮ ಕಟ್ಟಡಗಳ ನಿರ್ಮಾಣ ಮತ್ತು ಇತರೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ನಗರಪಾಲಿಕೆ ವಾಹನಗಳಿಗೆ ವೈರ್ ಲೆಸ್ ಯಂತ್ರಗಳನ್ನು ಅಳವಡಿಸಿದರು.

1990

ಮೈಸೂರು ನಗರಪಾಲಿಕೆ

1993 ರಿಂದ 1995ರ ವರೆಗೆ ಶ್ರೀ ಕೆ. ಶಿವರಾಂcರವರು ಮೈಸೂರು ನಗರಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಜನದಟ್ಟಣೆಯ ಕಾರಣದಿಂದ ಮುಖ್ಯರಸ್ತೆಗಳು ಮತ್ತು ಮಾರ್ಕೆಟ್ ಪ್ರದೇಶಗಳ ಸ್ವಚ್ಚತಾಕಾರ್ಯ ನಿಜವಾಗಿಯೂ ಕಠಿಣದ ಕೆಲಸವಾಗಿತ್ತು. ಶ್ರೀ ಕೆ. ಶಿವರಾಂ ರವರು ಸಮುದಾಯ ಬೆಂಬಲ ಕಾರ್ಯಕ್ರಮಗಳ ಭಾಗವಾಗಿ ತಮ್ಮ ಕೆಳ ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಜೊತೆಗೂಡಿ ಮುಖ್ಯ ರಸ್ತೆಗಳಾದ ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ ಮತ್ತು ದೇವರಾಜ ಮಾರುಕಟ್ಟೆಯನ್ನು ರಾತ್ರಿ ಸಮಯದಲ್ಲಿ ಸ್ವಚ್ಚಗೊಳಿಸಿ ಹಗಲಿನಲ್ಲಿ ಜನರು ಸುಲಭವಾಗಿ ಓಡಾಡುವಂತೆ ನೋಡಿಕೊಂಡರು.

ಆಶ್ರಯ ಯೋಜನೆಯಡಿಯಲ್ಲಿ ಬಡವರಿಗೆ ಮೈಸೂರಿನಲ್ಲಿ ಸುಮಾರು 4000ಕ್ಕೂ ಅಧಿಕ ಮನೆಗಳನ್ನು ಮಂಜೂರು ಮಾಡುವ ಮೂಲಕ ವಿಶಿಷ್ಟತೆಯನ್ನು ಮೆರೆದಿದ್ದಾರೆ.

1993

ಕೊಪ್ಪಳ ಜಿಲ್ಲೆ

1997ರಲ್ಲಿ ಕೊಪ್ಪಳ ಇನ್ನೂ ರಾಯಚೂರು ಜಿಲ್ಲೆಯ ಭಾಗವಾಗಿತ್ತು. ಸರ್ಕಾರ ಶ್ರೀ ಕೆ. ಶಿವರಾಂ ರವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಅಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ಸಂಪೂರ್ಣ ರೀತಿಯ ಸರ್ಕಾರಿ ಕಛೇರಿಯನ್ನು ನಿರ್ಮಿಸಿ, ಕೊಪ್ಪಳವನ್ನು ಜಿಲ್ಲೆಯನ್ನಾಗಿ ನಿರ್ಮಿಸುವ ಜವಾಬ್ಧಾರಿಯನ್ನು ನೀಡಲಾಯಿತು. ಅವರ ಪರಿಶ್ರಮದ ಫಲವಾಗಿ ನಾವು ಇಂದು ಸುಸಜ್ಜಿತವಾದ ಕೊಪ್ಪಳ ಜಿಲ್ಲೆಯನ್ನು ನೋಡಬಹುದು.

1997

ದಾವಣೆಗೆರೆ ಜಿಲ್ಲೆ

2000ನೇ ಇಸವಿಯಲ್ಲಿ ಸರ್ಕಾರ ಶ್ರೀ ಕೆ. ಶಿವರಾಂ ರವರನ್ನು ದಾವಣೆಗೆರೆ ಜಿಲ್ಲಾ ಉಪ ಆಯುಕ್ತರನ್ನಾಗಿ ನೇಮಿಸಿತು.

ಶ್ರೀ ಕೆ. ಶಿವರಾಂ ರವರು ದಾವಣೆಗೆರೆ ಜಿಲ್ಲೆಯಲ್ಲಿ ಸುಮಾರು 11,000 ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಅವುಗಳಿಗೆ ಬೇಕಾದ ಒಳಚರಂಡಿ, ಬೀದಿದೀಪ, ಉತ್ತಮ ರಸ್ತೆ, ಕುಡಿಯುವ ನೀರು, ಮರಗಳನ್ನು ನೆಟ್ಟು ಅದರ ಜೊತೆಗೆ ಅನೇಕ ವ್ಯವಸ್ಥೆಗಳನ್ನು ಮಾಡಿಕೊಟ್ಟು, ಅವುಗಳನ್ನು ದುರ್ಬಲ ವರ್ಗ, ಹಿಂದುಳಿದ ವರ್ಗ, ಬೀದಿ ವ್ಯಾಪಾರಿಗಳು ಮತ್ತು ಪ್ರಕೃತಿ ವಿಕೋಪಕ್ಕೆ ಒಳಗಾದ ಜನರಿಗೆ ನೀಡಿದರು.

ದಾವಣೆಗೆರೆಯ ಅನೇಕ ಕಡೆ ಇದ್ದ ಮೂಲಸೌಕರ್ಯಗಳ ಕೊರತೆಯನ್ನು ಅರ್ಥಮಾಡಿಕೊಂಡು ಅಲ್ಲಿನ ಹೋಬಳಿಯ ಸುಮಾರು 45 ಹಳ್ಳಿಗಳಿಗೆ “ನಮ್ಮ ನಾಡು” ಎಂಬ ಯೋಜನೆಯಡಿಯಲ್ಲಿ ಕುಡಿಯುವ ನೀರು, ವಿಧವಾ ವೇತನ, ವಿಕಲಚೇತನಾ ವೇತನ, ವೃದ್ಧಾಪ್ಯ ವೇತನ, ರಸ್ತೆ ದುರಸ್ತಿ ಕೆಲಸ, ಅಂಗನವಾಡಿ ಕಟ್ಟಡ ಮತ್ತು ಶಾಲಾ ಕಟ್ಟಡಗಳ ದುರಸ್ಥಿ ಹಾಗೂ ಬಡವರಿಗೆ ನಿವೇಶನ ವಿತರಣೆ ಮಾಡಿ ಅವು ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಂಡಿದ್ದಾರೆ.

ಈ ಎಲ್ಲಾ ಸೌಲಭ್ಯಗಳು ಸಾಮಾನ್ಯ ಜನರಿಗೆ ತಲಪುವಂತೆ ನೋಡಿಕೊಳ್ಳಲು ಪ್ರತೀ ತಿಂಗಳಲ್ಲಿ 3 ದಿನ ಶ್ರೀ ಕೆ. ಶಿವರಾಂ ರವರು ತಮ್ಮ ಅಧಿಕಾರಿಗಳೊಂದಿಗೆ ಸರ್ಕಾರಿ ಬಸ್ಸಿನಲ್ಲಿ ಆ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದರು. ಇದೇ ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಉಪ ಆಯುಕ್ತರೊಬ್ಬರು ಜನರ ಬಳಿಗೆ ಹೋಗಿ ಅವರ ಕುಂದುಕೊರತೆಗಳನ್ನು ಕೇಳಿ ತಕ್ಷಣ ಅದಕ್ಕೆ ಪರಿಹಾರ ಒದಗಿಸುವ ಯೋಜನೆಯನ್ನು ಕೈಗೊಂಡಿದ್ದು.

ಅವರು ಪರಿಹಾರ ನಿಧಿಯನ್ನು ಬರ ಮತ್ತು ಇತರೆ ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ ಒಳ್ಳೆಯ ರೀತಿಯಲ್ಲಿ ಬಳಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಶ್ರೀ ಕೆ. ಶಿವರಾಂ ರವರಿಗೆ ಸಾಮಾಜಿಕ ಪಿಡುಗುಗಳಾದ ಬಾಲಕಾರ್ಮಿಕ ಮತ್ತು ಜೀತಪದ್ದತಿ ಬಗ್ಗೆ ಚೆನ್ನಾಗಿಯೇ ಅರಿವಿತ್ತು. ಆ ದೌರ್ಜನ್ಯಗಳ ವಿರುದ್ಧ ನಿಂತು ದಾವಣಗೆರೆಯಾದ್ಯಂತ ಮಿಠಾಯಿ ಕಾರ್ಖಾನೆ, ಹೋಟೆಲ್, ಆಭರಣ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳನ್ನು ರಕ್ಷಿಸಿದರು. ಆ ಮಕ್ಕಳ ಶಿಕ್ಷಣಕ್ಕೋಸ್ಕರ ದಾವಣಗೆರೆಯಾದ್ಯಂತ ಸುಮಾರು 15 ಶಾಲೆಗಳನ್ನು ಕಟ್ಟಿಸಿದರು. ಅಲ್ಲದೆ ಜಿಲ್ಲೆಯ ಕುಗ್ರಾಮಗಳಿಗೆ ಭೇಟಿನೀಡಿ ಅಲ್ಲಿ ಕೆಲಸ ಮಾಡುತ್ತಿದ್ದ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜೀತ ಮಕ್ಕಳನ್ನು ರಕ್ಷಿಸಿದರು.

ನಗರದ ಮೂಲಸೌಕರ್ಯಗಳ ಸುಧಾರಣೆಗಾಗಿ ಅವರು ಬೀದಿ ದೀಪಗಳನ್ನು ಮಂಜೂರು ಮಾಡಿ ಅವುಗಳನ್ನು ನಗರಾದ್ಯಂತ ಅಳವಡಿಸಿ ಜನರಿಗೆ ಒಳ್ಳೆಯ ಸೇವೆಯನ್ನು ನೀಡಲು ಕಂಟ್ರೋಲ್ ರೂಂ ಮತ್ತು ವೈರ್ಲೆಿಸ್ಗಿಳನ್ನು ಅಳವಡಿಸಲಾಯಿತು.

ಸ್ವತಃ ಒಬ್ಬ ಕ್ರೀಡಾ ಉತ್ಸಾಹಿಯಾಗಿದ್ದ ಶ್ರೀ ಕೆ. ಶಿವರಾಂ ರವರು ದಾವಣಗೆರೆಯಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಕೋರ್ಟ್ ಸ್ಥಾಪನೆ ಮಾಡಿ ಅಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಟೂರ್ನಿಯನ್ನು ಆಯೋಜಿಸಿದರು. ಅಲ್ಲದೆ ಕೆ.ಎ.ಎಸ್. ಮತ್ತು ಐ.ಎ.ಎಸ್. ಆಕಾಂಕ್ಷಿಗಳಿಗೆ ಬೆಂಬಲ ನೀಡುವ ಸಲುವಾಗಿ ಅವರಿಗೋಸ್ಕರವೇ ಗ್ರಂಥಾಲಯವನ್ನು ಸ್ಥಾಪಿಸಿದರು.

2000

ಸಮಾಜ ಕಲ್ಯಾಣ ಇಲಾಕೆ

ಸಮಾಜದಲ್ಲಿ ಅವರು ತಂದ ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳನ್ನು ಪರಿಗಣಿಸಿ ಸರ್ಕಾರ ಅವರನ್ನು ಸಮಾಜ ಕಲ್ಯಾಣ ಇಲಾಖೆಗೆ ವರ್ಗಾಯಿಸಿ ಅವರನ್ನು ಆಯುಕ್ತರನ್ನಾಗಿ ನೇಮಿಸಲಾಯಿತು.

ಆಯುಕ್ತರ ಅಧಿಕಾರಾವಧಿಯಲ್ಲಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಅನೇಕ ನವೀನ ಯೋಜನೆಗಳಾದ ಏರ್ ಹೋಸ್ಟೆಸ್ ತರಭೇತಿ, ಪೈಲಟ್ ತರಭೇತಿ, ನರ್ಸ್ ತರಭೇತಿ ಮತ್ತು ಫ್ಯಾಷನ್ ಡಿಸೈನ್ ತರಭೇತಿಯನ್ನು ಪ್ರಾರಂಭಿಸಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಪುನರಾವರ್ತಿತ ಮನವಿಯ ಮೇಲೆ ಅವರ ಮೇಲೆ ನಡೆಯುತ್ತಿದ್ದ ದುಷ್ಕೃತ್ಯಗಳು ಮತ್ತು ಸಾಮಾಜಿಕ ಬಹಿಷ್ಕಾರಗಳ ಪರ ಧ್ವನಿ ಎತ್ತಿ ಅವುಗಳ ವಿರುದ್ಧ ಹೋರಾಡಿದರು. ಅವರಿಗೆ ಹೊಸ ಮನೆಗಳನ್ನು ನಿರ್ಮಿಸಿ ಪುನರ್ವಸತಿ ಕಾರ್ಯಕ್ರಮ ಕಲ್ಪಿಸಿಕೊಟ್ಟು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಬಳಸಿಕೊಂಡು ಸರ್ಕಾರಿ ಉದ್ಯೋಗ ಮತ್ತು ಹಣಕಾಸಿನ ನೆರವನ್ನು ಒದಗಿಸಿದರು.

ಒಬ್ಬ ಆಯುಕ್ತರಾಗಿ, ಅವರು 18000 ಖಾಲಿಯಿದ್ದ ಹುದ್ದೆಗಳನ್ನು ಗುರುತಿಸಿ ಅವರಲ್ಲಿ ಸುಮಾರು 14000 ಜನರಿಗೆ ಸರ್ಕಾರಿ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ದೆಹಲಿ ಮತ್ತು ಹೈದಾರಾಬಾದ್ನನ ವಿವಿಧ ಪ್ರಸಿದ್ದ ಸಂಸ್ಥೆಗಳಲ್ಲಿ ಐ.ಎ.ಎಸ್. ತರಭೇತಿ ನೀಡಲು ಯೋಜನೆಯನ್ನು ಪ್ರಾರಂಭಿಸಿದರು.

2002

ಸಾಮೂಹಿಕ ಶಿಕ್ಷಣ ಆಯುಕ್ತರು, ಬೆಂಗಳೂರು.

ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಪ್ರವೇಶದ ಕೊರತೆಯಿಂದಾಗಿ, ಸಾಕ್ಷರತೆ ತುಂಬಾ ಕಡಿಮೆಯಿತ್ತು. ಅನಕ್ಷರತೆಯನ್ನು ನಿರ್ಮೂಲ ಮಾಡಲು ಶ್ರೀ ಕೆ. ಶಿವರಾಂ ರವರು ಸಾಮೂಹಿಕ ಸಾಕ್ಷರತಾ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭಿಸಿದರು, ಅಲ್ಲದೆ ರಾಜ್ಯಾದ್ಯಂತ ಅನೇಕ ಫಲಿತಾಂಶಾಧಾರಿತ ಸಾಕ್ಷರತಾ ಶಿಬಿರಗಳನ್ನು ಸೃಷ್ಟಿಸಿದರು. ಅವರ ಅಧಿಕಾರವಧಿಯಲ್ಲಿ ಈ ಚಳುವಳಿಯನ್ನು ಉತ್ತೇಜಿಸಲು ನಗರದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ಸಭೆಯನ್ನು ನಡೆಸಿದರು.

2006

ಆಹಾರ ಆಯುಕ್ತರು – ಬೆಂಗಳೂರು

2009 ರಲ್ಲಿ ಶ್ರೀ ಕೆ. ಶಿವರಾಂರವರು ಬೆಂಗಳೂರಿನ ಆಹಾರ ಆಯುಕ್ತರಾಗಿ ನೇಮಕಗೊಂಡರು. ಅಲ್ಲಿ ಅವರು ಸರ್ಕಾರದ ಆಹಾರ ಉತ್ಪನ್ನಗಳ ಕಾಳಸಂತೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು. ಜನರ ಕುಂದುಕೊರತೆಗಳನ್ನು ಕೇಳಲು ನಿಯಂತ್ರಣಾ ಕೊಠಡಿಯನ್ನು ಪ್ರಾರಂಭಿಸಿ ಮುಧ್ಯವರ್ತಿಗಳಿಂದಾಗುತ್ತಿದ್ದ ಆಹಾರ ಧಾನ್ಯಗಳ ದುರ್ಬಳಕೆಯನ್ನು ತಡೆಗಟ್ಟಿದರು.

2009

ಎಂ ಎಸ್ ಐ ಎಲ್ – ವ್ಯವಸ್ಥಾಪಕ ನಿರ್ದೇಶಕರು

ಆಹಾರ ಮತ್ತು ಸುರಕ್ಷತೆಯ ಕ್ಷೇತ್ರದಲ್ಲಿನ ಅವರ ಗಮನಾರ್ಹ ಜ್ಞಾನದಿಂದ ಅವರು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಈ ಸಮಯದಲ್ಲಿ ಎಂ.ಎಸ್ .ಐ.ಎಲ್. ದೊಡ್ಡ ನಷ್ಟವನ್ನು ಅನುಭವಿಸಿತ್ತು. ಅಲ್ಲಿ ಸ್ಥಿರತೆ ಮತ್ತು ಲಾಭಗಳನ್ನು ಹೆಚ್ಚಿಸಲು ಶ್ರೀ ಕೆ. ಶಿವರಾಂ ರವರು ಕರ್ನಾಟಕದ ಎಲ್ಲಾ ಕಡೆ ಎಂ.ಎಸ್.ಐ.ಎಲ್. ನ ಚಿಲ್ಲರೆ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿದರು. ಈ ಮಳಿಗೆಗಳ ಮೂಲಕ ಸರ್ಕಾರವು ಸರಿಯಾದ ಮದ್ಯವನ್ನು ಸರಿಯಾದ ಗರಿಷ್ಟ ಚಿಲ್ಲರೆ ಬೆಲೆಯೊಂದಿಗೆ ಗ್ರಾಹಕರಿಗೆ ಪೂರೈಸಲು ಸಾಧ್ಯವಾಯಿತು.

2010

ಪ್ರಧಾನ ಕಾರ್ಯದರ್ಶಿ – ಪಶುಸಂಗೋಪನೆ

ಶ್ರೀ ಕೆ. ಶಿವರಾಂ ರವರು ಪಶುಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿದ್ದಾರೆ. ಅಲ್ಲಿ ಅವರು ಇಡೀ ಇಲಾಖೆಯ ಮರುಸಂಘಟನೆಯನ್ನು ಪ್ರಾರಂಭಿಸಿದರು. ಹಲವು ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸುವುದರ ಮೂಲಕ ಇಲಾಖೆಯು ಸುಗಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲು ಕ್ರಮ ಕೈಗೊಂಡರು.

2011

ಬೆಂಗಳೂರು ಪ್ರಾದೇಶಿಕ ಆಯುಕ್ತರು

2013 ರಲ್ಲಿ ನಿವೃತ್ತಿಗೆ ಮೊದಲು ಶ್ರೀ ಕೆ. ಶಿವರಾಂರವರು ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿದ್ದರು. ಸೇವೆಯಲ್ಲಿರುವಾಗಲೇ ತಮ್ಮ ಪ್ರಾಣ ಕಳೆದುಕೊಂಡ ಅಧಿಕಾರಿಗಳ ಕುಟುಂಬದ ಸದಸ್ಯರುಗಳಿಗೆ ಸಹಾನುಭೂತಿಯ ಆಧಾರದ ಮೇಲೆ 150 ಸರ್ಕಾರಿ ಉದ್ಯೋಗಗಳನ್ನು ನೀಡಿದರು.

ತಮ್ಮ ಕುಟುಂಬ ಸದಸ್ಯರಿಂದ ಕಡೆಗಣಿಸಲ್ಪಟ್ಟು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹಿಂದುಳಿದಿರುವವರ ಅನಾರೋಗ್ಯದ ಪುನರ್ವಸತಿಗಾಗಿ ಅವರು ಐತಿಹಾಸಿಕ ಚಾಲನೆ ನೀಡಿದರು. ಇದು ದಾವಣಗೆರೆಯ ಜಿಲ್ಲೆಯ ಜಗಳೂರು ತಾಲ್ಲೂಕಿನ ಲಕ್ಕಾಂಪುರ್ ಎಂಬ ಹಳ್ಳಿಯಲ್ಲಿ ನಡೆದ ಘಟನೆಯಿಂದ ಪ್ರಾರಂಭವಾಯಿತು. ಅಲ್ಲಿ ಒಬ್ಬ ಮಾನಸಿಕವಾಗಿ ಹಿಂದುಳಿದ ಪದವೀಧರನಿಗೆ ಬಾಗಿಲು ಇಲ್ಲದ ಒಂದು ಸಣ್ಣ ಕೋಣೆಯಲ್ಲಿ ಕೂಡಿಹಾಕಿ ಸಣ್ಣ ರಂದ್ರದ ಮೂಲಕ ಆಹಾರವನ್ನು ನೀಡಲಾಗುತ್ತಿತ್ತು. ಈ ರೀತಿಯ ಶೋಷಣೆಗೊಳಗಾದ ವ್ಯಕ್ತಿ ಎಲ್ಲಾ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇದನ್ನರಿತ ತಕ್ಷಣ ಶ್ರೀ ಕೆ. ಶಿವರಾಂ ರವರು ಆಂಬ್ಯುಲೆನ್ಸ್ ಮತ್ತು ಅವರ ತಂಡದೊಂದಿಗೆ ಆ ಸ್ಥಳಕ್ಕೆ ಬಂದು ಅವರನ್ನು ರಕ್ಷಿಸಿ ನಂತರ ಅವರನ್ನು ನಿಮ್ ಹ್ಯಾನ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು.

ಅಭಿನಂದನೆಗಳು

  • ಕನ್ನಡ ಭಾಷೆಯಲ್ಲಿ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಾಧನೆಗಾಗಿ 1991 ರಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದರು.
  • ದಾವಣಗೆರೆಯಲ್ಲಿ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ನಬಾರ್ಡ್ ಪ್ರಶಸ್ತಿಯನ್ನು ಪಡೆದರು.
  • ಕಾರವಾರದಲ್ಲಿ ಸಾಮೂಹಿಕ ಸಾಕ್ಷರತಾ ಅಭಿಯಾನಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಸ್ತಿಯನ್ನು ಪಡೆದರು.

2013

ಇತರೆ ಮಾಹಿತಿ

ಶ್ರೀ ಕೆ. ಶಿವರಾಂ ರವರು ಛಲವಾದಿ ಮಹಾ ಸಭಾದ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಛಲವಾದಿ ಸಮೂದಾಯವನ್ನು ತಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಇವರು ಶ್ರಮಿಸುತ್ತಿದ್ದಾರೆ. ಸ್ಥಿರ ನಾಯಕತ್ವದ ಮತ್ತು ತರ್ಖಬದ್ಧ ವ್ಯಕ್ತಿಯಾಗಿರುವ ಇವರು ಛಲವಾದಿ ಮಹಾಸಭಾದ ಗುರಿಗಳನ್ನು ನಿಖರವಾಗಿ ವ್ಯಾಖ್ಯಾನಿಸುತ್ತಾರೆ.

ಛಲವಾದಿ ಮಹಾಸಭಾದ ಮೊದಲ ಮಹಾ ಸಭೆ ಶಿವಮೊಗ್ಗದಲ್ಲಿ ನಡೆಯಿತು. ಇದನ್ನು ಶ್ರೀ ಯಡ್ಡಿಯೂರಪ್ಪನವರು ಉದ್ಘಾಟಿಸಿದ್ದರು. ಇದರಲ್ಲಿ ಸುಮಾರು 2.5 ಲಕ್ಷ ಜನರು ಭಾಗವಹಿಸಿದ್ದರು. ಶ್ರೀ ಯಡ್ಡಿಯೂರಪ್ಪನವರು ಸಮದಾಯ ಭವನ ನಿರ್ಮಾಣಕ್ಕಾಗಿ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಿ ಬೆಂಗಳೂರಿನಲ್ಲಿ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಿದರು.

ಎರಡನೇ ಅಧಿವೇಶನವು ಬೆಂಗಳೂರಿನಲ್ಲಿ ನಡೆಯಿತು. ಆಗ ಸಮೂದಾಯ ಭವನಕ್ಕೆ ಅಡಿಪಾಯ ಹಾಕಲಾಯಿತು. ಈ ಸಮಾವೇಶದಲ್ಲಿ ಸುಮಾರು ಐವತ್ತು ಸಾವಿರ ಜನರು ಭಾಗವಹಿಸಿದ್ದರು. ಅಲ್ಲಿ ಶ್ರೀ ಯಡ್ಡಿಯೂರಪ್ಪನವರು ಸಮದಾಯ ಭವನ ಕಟ್ಟಡ ನಿರ್ಮಾಣಕ್ಕಾಗಿ ಐದು ಕೋಟಿ ರೂಪಾಯಿಯನ್ನು ಘೋಷಿಸಿದರು.
ಮೂರನೇ ಅಧಿವೇಶನವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು, ಅಲ್ಲಿ ಎರಡು ಲಕ್ಷ ಜನರ ಗುಂಪು ಸೇರಿತ್ತು.

ಅವರು ಛಲವಾದಿ ಮಹಾಸಭಾದ ಮುಖಾಂತರ ಕರ್ನಾಟಕದಾದ್ಯಂತ ಕೈಗೊಂಡ ಸಮುದಾಯ ಸಭಾಂಗಣಗಳು, ಗ್ರಂಥಾಲಯಗಳು, ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರಿಕ್ಷಾ ತರಭೇತಿ ಸಂಸ್ಥೆಗಳ ಅಭಿವೃದ್ಧಿ ಚಟುವಟಿಕೆಗಳ ಹಿಂದೆ ಶ್ರೀ ಕೆ. ಶಿವರಾಂ ರವರು ಚಾಲನಾ ಶಕ್ತಿಯಾಗಿದ್ದಾರೆ.

ಕರ್ನಾಟಕದ ಹಳ್ಳಿಗಾಡುಗಳಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ದಲಿತ ಮಹಾ ಸಭಾದಲ್ಲೂ ಕೂಡಾ ಶ್ರೀ ಕೆ. ಶಿವರಾಂ ರವರು ಸ್ವತಃ ತೊಡಗಿಸಿ ಕೊಂಡಿದ್ದಾರೆ.

ಬಿಜೆಪಿಯೊಂದಿಗೆ ಶ್ರೀ ಕೆ. ಶಿವರಾಂ

ಶ್ರೀ ಕೆ. ಶಿವರಾಂರವರು 2016 ರ ಅಕ್ಟೋಬರ್ 14 ರಂದು ಶ್ರೀ ರಾಜ್ ನಾಥ್ ಸಿಂಗ್ (ಭಾರತ ಸರ್ಕಾರದ ಗೌರವಾನ್ವಿತ ಗೃಹ ಸಚಿವರು), ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಶ್ರೀ ಯಡ್ಡಿಯೂರಪ್ಪ ಮತ್ತು ಇತರ ಬಿಜೆಪಿ ನಾಯಕರು ಮತ್ತು ಗಣ್ಯರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು
ಶ್ರೀ ಕೆ. ಶಿವರಾಂರವರು ಅತ್ಯಂತ ಉತ್ಸಾಹದಾಯಕ ವ್ಯಕ್ತಿಯಾಗಿದ್ದು ಬಿಜೆಪಿಯ ಮುಷ್ಕರಗಳು, ಪ್ರದರ್ಶನಗಳು, ಪ್ರತಿಭಟನೆಗಳು ಮತ್ತು ಬಿಜೆಪಿಯು ಸಂಘಟಿಸಿದ ಎಲ್ಲಾ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಅವರನ್ನು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಅಲ್ಲದೆ ಅವರು ಗುಲ್ಬರ್ಗಾ ಮತ್ತು ಮೈಸೂರಿನಲ್ಲಿ ಪಕ್ಷ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಭಾಗವಹಿಸಿದ್ದಾರೆ.

ಅವರು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸಕ್ರಿಯ ಪಾತ್ರವಹಿಸಿ ಸುಮಾರು 104 ಗ್ರಾಮಗಳಲ್ಲಿ ಬೃಹತ್ ಪ್ರಚಾರ ಮಾಡಿದ್ದಾರೆ, ಅಲ್ಲಿ ಪರಿಶಿಷ್ಟ ಜಾತಿ(ಛಲವಾದಿ)ಯ 65% ಮತಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಅವರು ನಂಜನಗೂಡಿನ ಉಪಚುನಾವಣೆಯಲ್ಲಿ 2 ದಿನಗಳವರೆಗೆ ಪ್ರಚಾರವನ್ನು ಕೈಗೊಂಡು ಸುಮಾರು 28 ಗ್ರಾಮಗಳಿಗೆ ಭೇಟಿ ನೀಡಿದ್ದರು. ಇದರಿಂದ ಅಲ್ಲಿಯ ಬಿಜೆಪಿ ಅಭ್ಯರ್ಥಿಯು 28 ಗ್ರಾಮಗಳಲ್ಲಿ ಅಧಿಕವಾಗಿ ಪರಿಶಿಷ್ಟ ಜಾತಿಯ ಮತಗಳನ್ನು ಪಡೆಯಲು ಸಾಧ್ಯವಾಯಿತು.
ಬಿಜೆಪಿಯು ಕರ್ನಾಟಕ ರಾಜ್ಯಾದ್ಯಂತ ವಿಸ್ತಾರಾಕ್ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರನ್ನು ತಾಲ್ಲೂಕುಗಳಿಗೆ ನಿಯೋಜಿಸುವ ಮೂಲಕ ವಿಶೇಷ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿತು. ಇದರ ಅಂಗವಾಗಿ ಶ್ರೀ ಕೆ. ಶಿವರಾಂರವರನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿಗೆ ನೇಮಿಸಲ್ಪಟ್ಟರು. ಇದರ ಅಂಗವಾಗಿ, ಪಕ್ಷದ ಕಾರ್ಯಕರ್ತರು ತಾಲ್ಲೂಕಿನಲ್ಲಿ ಪಕ್ಷದ ಚಟುವಟಿಕೆಗಳನ್ನು ನೋಡಿಕೊಳ್ಳಲು 15 ದಿನಗಳವರೆಗೆ ಅಭಿಯಾನ ಮಾಡಬೇಕಿತ್ತು. ಅವರು 140 ಗ್ರಾಮಗಳನ್ನು ಭೇಟಿ ಮಾಡಿ 140 ಬೂತ್ ಸಮಿತಿ ಸಭೆಗಳನ್ನು ನಡೆಸಿದ್ದಾರೆ. ಭಾರತ ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡಿದ್ದಾರೆ ಅದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿಫಲತೆಗಳನ್ನು ಜನರಿಗೆ ತಿಳಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ತಾಲ್ಲೂಕಿನಲ್ಲಿ 15 ದಿನಗಳ ಕಾಲ ಕ್ಯಾಂಪಿಂಗ್ ಮೂಲಕ ಬಿಜೆಪಿಯನ್ನು ಬೆಂಬಲಿಸಲು ಜನರನ್ನು ಅದರಲ್ಲೂ ವಿಶೇಷವಾಗಿ ದಲಿತರನ್ನು ಮನವೊಲಿಸಿದ್ದಾರೆ.

ಸಿನಿಮಾ ತಾರೆಯಾಗಿ ಶ್ರೀ. ಕೆ. ಶಿವರಾಂರವರು

ಶ್ರೀ ಕೆ. ಶಿವರಾಂ ರವರು 1993ರಿಂದ ಸಿನಿಮಾ ನಾಯಕನಾಗಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. 1993 ರಲ್ಲಿ ತೆರಕಂಡ ಅವರ ಮೊದಲ ಚಿತ್ರ ಬಾ ನಲ್ಲೆ ಮಧುಚಂದ್ರಕೆ ತುಂಬಾ ಯಶಸ್ಸು ಗಳಿಸಿದ್ದು ಗಮನಾರ್ಹವಾಗಿದೆ.

ಅಂದಿನಿದ ವಸಂತ ಕಾವ್ಯ, ಪ್ರತಿಭಟನೆ, ಕಲಾನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ನಾಗ, ಮೂಡಲ ಸೀಮೆಯಲ್ಲಿ, ಸುಭಾಶ್, ಜೈ ಮತ್ತು 2017 ರಲ್ಲಿ ಬಿಡುಗಡೆಯಾದ ಟೈಗರ್ ಚಿತ್ರಗಳಲ್ಲಿ ನಟಿಸಿದ್ದಾರೆ.

IAS officer Yadgir

In the year 1988, he was first deputed as the Assistant Commissioner of Yadgir sub division, Gulbarga District. As an efficient administrator, he has settled many property disputes by providing proper Katha and RTC documents to the people of yadgir.

1988

Municipal Commissioner & Assistant Commissioner Bijapur

He was transferred to Bijapur in 1989 and was appointed as the Municipal Commissioner & Assistant Commissioner. As Commissioner, Shri K Shivram took up the first infrastructure project of constructing a Double road in the City center. For the 1st time in Karnataka, the incandescent street lights were replaced with Sodium vapor lamps all over the city. In an effort to create awareness and to put focus on sanitation, Shri K Shivram initiated a cleanliness drive .He himself took to the streets with the broom early in the morning and cleaned the dirt with the help of other officials, making it a mass movement across the District.

1989

Deputy Commissioner Bangalore City Corporation

The government then assigned the responsibility of deputy commissioner, Bangalore City Corporation to Shri K Shivram in the year 1990. Here he started the Movement “Janara Mane Baagilige Bengaluru Mahanagara Paalike”(Taking BBMP to the people s doorstep), a first of its kind, to help people at their doorstep. He demolished huts and sanctioned the construction of houses for the underprivileged in some parts of Bangalore city in areas like Rajajinagar, Srirampuram etc.To make the system more effective he started a Control room and installed wireless device to all the vehicles to curb illegal construction and other activities.

1990

Commissioner in Mysore City Corporation

Shri K Shivram served as Commissioner in Mysore City Corporation from 1993 to 1995.
During this time, due to congestion, cleaning of major roads and market places was a hectic job. Shri K Shivram, as part of his community support programs, along with his officials and pourakarmikas, he used to get the major locations cleaned up like Sayyaji Rao Road, Devaraj Urs road & Devaraja Market during the night for the people to commute easily during the day.
He also has the distinction of sanctioning the Construction of over 4000 houses in Mysore for the poor under Ashraya Scheme.

1993

Special Officer in Koppal District

During 1997 Koppal was still a part of Raichur. Shri K Shivram was appointed as special officer and was assigned the responsibility of creating a new district, setting up Zilla Panchayats, government offices with complete infrastructure. Through his dynamic leadership, he has helped shaping up Koppal District to what it is today.

1997

Deputy Commissioner of Davangere District.

In 2000 Shri K Shivram was appointed as Deputy Commissioner of Davangere district.
Sri K Shivram took initiative and built about 11,000 houses with all infrastructures like Drainage system, street lights, well laid roads, drinking water, tree plantations etc. and sanctioned these houses to the underprivileged, people of backward classes, street vendors & natural calamity victims.
Knowing the lack of infrastructure in many parts of Davangere, he initiated “Namma Naadu”, a scheme which targeted and solved the grieveances of the people like drinking water , widow pension,physically handicapped pension ,old age pension , road repair works ,anganawaadi building & school building repair works ,site distribution to poor which reached each and every people in over 45 villages of a Hobli he had selected each month.
Each month Shri Shivram along with his officials used to travel to these villages for 3 days in a KSRTC bus and made sure all the facilities had reached the common man. This is the first time in the state that a scheme like this was implemented where a Deputy Commisioner of a district with his officers heard the people’s grievances at their door step and took immediate steps to address them.
He put the Calamity relief fund to good use to help people affected by drought and other natural disasters.
Sri K Shivram was well aware of social evils such as Child Labour and Bonded labour system. He stood against these atrocities and rescued Children from Child Labor from Confectionery Industry, Hotels and Jewelry industry throughout Davangere. He built 15 schools across Davangere in an effort to educate such children. He also visited the remotest parts of the district and rescued people subjected to bonded labour particularly from SC ST Community.
To improve the City infrastructure he sanctioned street light installations across the city, introduced control Room and Wireless to serve people better.
As a sports enthusiast himself, Shri K Shivram started the International Tennis Court at Davangere and organized an international tournament.
He has also supported the KAS & IAS aspirants by starting a library exclusively for them.

2000

Social Welfare Department

The government, considering all the social and economic reforms he had brought about in the society, transferred him to Social Welfare Department and appointed him as Commissioner.
During his tenure as commissioner, he started many new innovative schemes for SC&ST people like Air Hostess training ,Pilot training ,nursing training and Fashion design Training .
Deeply moved by the repeated appeals of the SC&ST, he fought against Social boycott and the atrocities faced by these communities by building them new houses, initiating rehabilitation programs, providing government jobs and financial assistance by utilizing state & central government schemes.

As commissioner, he identified 18,000 backlog vacancies & provided government job for about 14,000 people.

He also initiated a scheme to provide IAS training in various reputed institutions in delhi & Hyderabad for SC&ST students.

2002

Mass Education Commissioner- Bangalore

Due to lack of education access in rural areas, the literacy rate was too low during this time. In an effort to abolish illiteracy, Shri K Shivram started Mass literacy campaign and created many outcome-oriented mass literacy Camps across the state. During his tenure, he held an International Literacy conference in the city to promote the Movement.

2006

Food Commissioner- Bangalore

Sri K Shivram was deputed as Food Commissioner, Bangalore in the year 2009. Here he tried to eradicate the black market of government food products.
He started a control room to hear the grievances of the people and misuse of food grains by intermediaries.

2009

MSIL – Managing Director

With his remarkable knowledge in Food and Safety domain, he also served as Managing director of the Mysore Sales International Limited.

During this time MSIL was incurring huge losses. To bring about stability and increase profits, Shri K Shivram started MSIL retail outlets all over Karnataka. Through these outlets, the government was able to supply original Liquor with the right MRP to the consumers.

2010

Principal Secretary – Animal Husbandry

Sri K Shivram has also served as Principal Secretary, Animal Husbandry Department, where he initiated the reorganization of the entire department.
He also ensured the smooth functioning of the Department by conducting inspections in many veterinary hospitals.

2011

Bangalore Regional Commissioner

Before his retirement in 2013, he was the Bangalore Regional Commissioner.He provided 150 Government jobs on compassionate grounds for the family members of officials who lost their lives while in service.

Accolades

  • Received the Prestigious Rajyotsava Award in the year 1991 for his achievement of passing IAS exam in kannada language .
  • Received the NABARD Award for Housing and Infrastructure development in Davangere.
  • Received the Central Government Award for Mass literacy Campaign in Karwar .

2013